ಇಬ್ಬನಿ

April 20, 2008

ಹೌದು….. ನೀನ್ಯಾಕೆ ಒಲಿಯಬಾರದು ?

Filed under: Uncategorized — kemmayi @ 2:55 pm

ನೋಡದ ಹುಡುಗಿಗೆ….,

ನೀನು ಹೇಗಿದ್ದೀಯೋ ಗೊತ್ತಿಲ್ಲ, ಎಲ್ಲಿದ್ದಿ ಅಂತ ಮಾತ್ರ ಗೊತ್ತು. ನಿನ್ನ ನೋಡೂ ಇಲ್ಲ. ಆದರೆ, ಲೆಕ್ಕವಿಲ್ಲದಷ್ಟು ಬಾರಿ ಮಾತನಾಡಿದ್ದೇನೆ. ಯಾರೇ ನೀನು ಚೆಲುವೆಯ ರವಿಚಂದ್ರನ್ ಥರಾ ಆಗಿದೆ ನನ್ನ ಸ್ಥಿತಿ. ಪ್ರೀತಿಸಬೇಕು ಅಂತ ಬಯಸಿದ್ದೇನೆ. ಹಾಗೆ ಬಯಸುವುದರಲ್ಲಿ ತಪ್ಪೇನಿದೆ ಹೇಳು ?

ದೇವರಿದ್ದಾನೋ……… ಇಲ್ಲವೋ ? ವಾದ ಮಾಡುವವರು ಮಾಡುತ್ತಲೇ ಇರಲಿ ನಂಗಂತೂ ನೀನೇ ದೇವತೆ. ನಿನ್ನನ್ನೇ ಪೂಜಿಸುತ್ತೇನೆ. ನಿನಗೇ ಸಂಪೂರ್ಣ ನಿಷ್ಠನಾಗಿದ್ದೇನೆ. ಹಾಗಂತ ನಿನ್ನ ಎದುರಿಗೇ ಕುಳಿತು, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಬೇಕು ಅಂತ ಅಂದುಕೊಳ್ಳುತ್ತೇನೆ. ಅದರೇನು ಮಾಡಲಿ, ಏಳು ಸಮುದ್ರ ದಾಟಿ ಬರಬಲ್ಲೆ, ಆದರೆ ಈ ಬಂಜರು ಭೂಮಿ ದಾಟಿ ಬರುವುದೇ ಸಮಸ್ಯೆ ನೋಡು.

ನಿನಗಾದರೂ ಏನು ಕಮ್ಮಿ ಹೋಳು. ಮಲೆನಾಡಿನ ಹುಡುಗಿ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರ ಪಲ್ಲಂಗ, ಹೆಜ್ಜೆಯಿಟ್ಟಲ್ಲೆಲ್ಲಾ ನೀರು. ಈಗಂತೂ ಮಳೆಯ ಹಾಡು. ನನ್ನ ಅವಸ್ಠೆ ಕೇಳಿಲ್ಲಿ….. ಮಳೆ ಬಿಡು ಇಬ್ಬನಿಯ ಹನಿಯೂ ಇಲ್ಲ. ಬರೀ ಬೋಲು ಗುಡ್ಡಗಳ ಸಾಲು. ಒಂದಾನೊಂದು ಕಾಲವಿತ್ತು. ಮಳೆಬಂದರೆ ಸಾಕು, ಮನಸೋ ಇಚ್ಚೆ ಮುಂಗಾರಿನ ಅಂಗಳದಲ್ಲಿ ಕುಣಿಯುತ್ತಿದ್ದೆ. ಮೊದಲ ಮಳೆಗೆ ಬೀಳುವ ಆಲಿಕಲ್ಲು ಹೆಕ್ಕಿಕೊಳ್ಳಲು ಹಪಹಪಿಸುತ್ತಿದ್ದೆ. ಶಾಲೆಯೊಳಗಡೆ ನೀರು ಬಂದರೆ ಸಾಕು, ನೋಟು ಪುಸ್ತಕದ ಹಾಳೆಗಳು ದೋಣಿ ಗಳಾಗುತ್ತಿದ್ದವು. ಮನ್ಗೆ ಬಂದರೆ, ಅಜ್ಜನ ಹುಳಿ ಅಡರಿನ ಏಟು ಕಾಯ್ತಾ ಇರುತ್ತಿತ್ತು. ಈಗ ಹಾಗಲ್ಲ ನೋಡು. ಇಲ್ಲಿ ಮಳೆ ಒಲಿಯುವುದೇ ಇಲ್ಲ, ಹೌದು….. ನೀನ್ಯಾಕೆ ಒಲಿಯಬಾರದು ?

ನಿನ್ನ ಪೆದ್ದು ಹುಡುಗ

2 Comments »

  1. tumba chennagide……….

    Comment by Ravindra — April 21, 2008 @ 11:39 pm | Reply

  2. nice to read..

    Comment by harish Mambady — September 12, 2008 @ 4:26 pm | Reply


RSS feed for comments on this post. TrackBack URI

Leave a comment

Blog at WordPress.com.