ಇಬ್ಬನಿ

August 31, 2007

ಆಕೆ ಮತ್ತು ಪ್ರೀತಿ

Filed under: ಬೋನ್ಸಾಯ್ — kemmayi @ 1:12 pm

ಆಕೆ ಅವನ ಬಳಿ ತುಟಿ ಬಿಚ್ಚಿ ಮಾತನಾಡದಿದ್ದರೂ, ಕಣ್ಣಿನ ಮಾತುಗಳು ಸಾವಿರ ಪದಗಳನ್ನು ಮೀರಿಸಿದ್ದವು. ಪ್ರೀತಿಯ ದದ್ಯೋತಕವಾಗಿ ಮಳ್ಳಿಗೆಯ ಬಳಿಳಿಯನ್ನ್ಫು ಆಕೆಗೆ ನೀಡಿ ಬೇಗ ಬರುವೆನೆಂದು ತಿಳಿಸಿ ಊರಿಗೆ ಮರಳಿದ. ಆಕೆ ಅದನ್ನು ಜೋಪಾನವಾಗಿ ಬೆಳೆಸಿದಳು. ಬಳ್ಳಿ ಮಾವಿನ ಮರದ ಆಸರೆಯಲ್ಲಿ ವಿಸ್ತಾರವಾಗಿ ಬೆಳೆಯಿತು. ಮೊಗ್ಗಾಯಿತು….ಹೂವಾಯಿತು…..ಬಾಡಿತು. ಆತನ ಸುಳಿವಿಲ್ಲ.

ಅವನ ನೆನಪು ಮಾಸದಾಗ ಅಕ್ಕನ ಕಂದನಿಗೆ ಆ ಸರೆಯಾದಳು. ಆ ಕಂದನ ಕಣಣಲ್ಲಿ ಅವನ ಬಿಂಬ ಕಾಣುತ್ತಿದ್ದಳು. ಕಾಯುತ್ತಿದ್ದಳು. ಕೊನೆಗೂ ಆತ ಬಂದನೇ ಬಂದ.

ಮಲ್ಲಿಗೆಯ ಬಳ್ಳಿ ಬಾಡಿತ್ತು. ಅದರ ಹಿಂದೆ ನಿಂತು ದಿಟ್ಟಿಸಿದ. ಇವಳ ಮಡಿಲಲ್ಲಿ ಕಿಲಕಿಲ ನಗುತ್ತಿತ್ತು ಮುದ್ದುಕಂದ. ಆತನ ಪ್ರೀತಿತ್ಯ ಕುಸುಮ ಅರಳುವ ಮೊದಲೇ ಬಾಡಿತ್ತು..ಬಂದ ದಾರಿಯಲ್ಲೇ ಹಿಂತಿರುಗಿದ.

ಮಲ್ಲಿಗೆ ಬಳ್ಳಿಯ ಆಸರೆ ಕೊಂಡಿ ಕಳಚಿ ಬಿತ್ತು.
ಪುನ ಆಕೆ ಅವನಿಗಾಗಿ ಅಲ್ಲೇ ಕಾದಳು.

August 15, 2007

ನಾವೀಗ ‘ಹಿರಿಯ ನಾಗರೀಕರು’- ನಮಗೀಗ 60

Filed under: ಸುಮ್ ಸುಮ್ನೆ — kemmayi @ 5:55 am

ಸ್ವಾತಂತ್ರ್ಯ ಸುಮ್ಮನೇ ಬಂದದ್ದಲ್ಲ. ಅಲ್ಲಿ ಕೋಟಿ ತ್ಯಾಗದ ಫಲವಿದೆ.
ನಮ್ಮ ಹೆಮ್ಮೆಯ ಹಿಂದೆ ನೂರಾರು ಏಳುಬೀಳುಗಳಿವೆ
ಹಾಗೇ 60ರ ಸಂಭ್ರಮ ಆಚರಿಸಲು 60ಕ್ಕೂ ದಾರಿಗಳಿವೆ.
ಇದು ನನ್ನ ದಾರಿ.

ಸ್ವತಂತ್ರವಾಗಿರುವ 60ರ ಸಂಭ್ರಮಕ್ಕೆ ನನ್ನ ಶುಭಾಶಯಗಳು.

ಸರ್ವೆಗಳು ತುಂಬಾ ನಡೆಯುತ್ತಿವೆ. ಯಾರು ಪ್ರಭಾವಿ ಭಾರತೀಯರು ಅಂತ.
ಇನ್ನೂ 40 ವರುಶಗಳಿವೆ. ಸ್ವಾತಂತ್ರ್ಯದ ಶತಕ ಬಾರಿಸಲು.
ಅದರೊಳಗೆ, ನಾವು ಪ್ರತಿಯೊಬ್ಬರೂ, ಪ್ರಭಾವಿಗಳಾಗಬೇಕು.

ಅದು ಸ್ವಾತಂತ್ರ್ಯದ 60ರ ಹೊಸ್ತಿಲಲ್ಲಿ ನಿಂತಿರುವ ನಮಗೆ ಗುರಿಯಾಗಬೇಕು.

August 6, 2007

ಈ ಪ್ರೀತಿಯಾ ಮರೆತು ನಾ ಹೇಗೆ ಬಾಳಲ್ಹೇಳು ?

Filed under: Uncategorized — kemmayi @ 6:35 am

ಒಲವಿನ ಜೀವ ಸುಧೆಗೆ..,

ಅರೆರೆ, ಆಗಲೇ, ಬರಾಬ್ಬರಿ 5 ವರುಶ ಆಯ್ತು ನೋಡು, ನಿಂಗೆ ಪತ್ರ ಬರೆದು. ನೀನಿಲ್ಲ್ದೆ ಕಳೆ ದ  5 ಯುಗಗಳು….ಅಬ್ಬಾ…. ಭಯ ಆಗತ್ತೆ. ಇವತ್ಯಾಕೋ  ಬರೆಯಲೇ ಬೇಕೆನ್ನಿಸಿ ದೆ. ಯಾಕೆ ಗೊತ್ತಾ ? ನೀನು ಮರೆತಿರಬಹುದು. ಆದರೆ ನಂಗೆ ಹಾಗಲ್ಲ ನೋಡು, ನಮ್ಮ ಪ್ರೇಮಕ್ಕೆ ಮೊಹರು ಬಿದ್ದ ದಿನ ಇವತ್ತು. ಕಾಲೇಜಿನ್ ಕ್ಲಾಸ್ ರೂಮಿನಲ್ಲಿ ಘಂ ಟಾ ಘೋಶವಾಗಿ, ನಾನು ನಿನ್ನನ್ನು ಪ್ರೀತಿಸ್ತೇನೆ ಅಂತ ಹೇಳಿಕೊಂಡ ದಿನ. ಅದಕ್ಕೇ     ಇಸ್ಟೊಂದು ಹಹಪಹಪಿಕೆ.

ಅದು ಮೂರರ ಸಂಜೆ. ಆಗ ತಾನೇ ಸೋನೆ ಮಳೆ ಸುರಿಯುತ್ತಿತ್ತು. ಖಾಲಿಯಾದ ಕಾರಿಡಾರಿನ  ಬಳ ನಾನು ನಿಂತಿದ್ದೆ, ಮಳೆ ಕಡಿಮೆಯಾಗುವುದನ್ನೇ ನಿರೀಕ್ಸಿಸುತ್ತಾ. ನೀನ್ಯಾಕೋ ಮುಂದೆ ಹೋದವಳು  ಕೂಡಾ ತಿರುಗಿ ಬಂದು. ನಂಗೆ ಕೊಡೆ ಹಿಡಿದೆ. ಕಣ್ಣಲ್ಲಿ ವಾತ್ಸಲ್ಯವಿತ್ತು. ನಿನ್ನ ಒಲವಿನ  ಕರೆಗೆ ಬೇಡ ಅನ್ನುವ  ಗತ್ತು ನನ್ನಲ್ಲಿರಲಿಲ್ಲ. ಮರುದಿನ ಕಾಲೇಜು ತಂಬಾ ಗುಲ್ಲೋ ಗುಲ್ಲು. ನಮಗೇ ಅರಿವಿಲ್ಲದೆ, ನಾವು ಪ್ರೇಮ ಸಾಮ್ರಾಜ್ಯದಲ್ಲಿ  ದಾಖಲಾದೆವು. ನನ್ನ ಚಿಗುರು ಮೀಸೆಯ ಅಡಿಯಲ್ಲಿ ಸ್ವಲ್ಪ   ದರ್ಪವಿತ್ತು.  ಹಾಗಾಗಿ ನಾನು ಪ್ರೀತಿಸಲ್ಲ ಅಂದೆ.  ಏಸೊಂದು ನಿರ್ದಯಿ ನೋಡು ನಾನು.

ದಿನವೂ ಇದೇ ಕತೆ  ಕೇಳಿ ಸಾಕಾಗಿದ್ದ ನಿನಗೆ ಹೊಸ ಕಾಲೇಜು, ಹೊಸ ಗೆಳೆಯರು ಬರೆ ಒಂದೇ ತಿಂಗಳಿಗೆ ಬೋರಾದರು. ನಿನ್ನ ಕಂದಿದ ಮುಖ ನೋಡೋದಕ್ಕೆ ನನ್ನಿಂದ ಸಾದ್ಯವಾಗಲಿಲ್ಲ. ಕೊನೆಗೆ ಕ್ಲಾಸಿನಲ್ಲೇ ಎಲ್ಲರ ಎದುರಿಗೆ ಹೇಳಿದೆ… ನಿನ್ನ ಪರ್ಮಿಶನ್ನೂ  ಇಲ್ಲದೆ!

ಅದಾಗಿ, ಒ0ದು ತಿಂಗ ಳು ಬೇಕಾಯಿತು ನೋಡು ಪ್ರೀತಿಗೆ ನಿನ್ನ ಸಹಿ ಬೇಳಲು. ಆಮೇಲೆ ನಡೆದಿದ್ದೆಲ್ಲಾ  ಬರೀ ಕತೆ. ಅದೇಸು ಕನಸು ಕಂಡಿದ್ದೆವು. ಅದೇಸು ಚಿತ್ತಾರ ಬರೆದಿದ್ದೆವು. ನನಗೆ ಕೊಡೆ  ಹಿಡಿದ ಹುಡುಗಿಯ ಕ್ಯ್ ಹಿಡಿಯೋ ಭಾಗ್ಯ ನನ್ನದು ಅಂದು ಕೊಳ್ಳುವಾಗಲೇ….. ನೀನು ನನ್ನ ಬಾಳಿನಿಂದ ಎದ್ದು ಹೋಗಿದ್ದೆ.  ಅದು ಮೇ 2, 2004. ಅಂತಿಮ ವರುಶದ ಪರೀಕ್ಷೆ ಬರೆಯುತ್ತಿದ್ದೆ. ಇನ್ನೆರಡೇ ಎರಡು ವಾರ ಕಳೆದಿರುತ್ತಿದ್ದರೆ, ನಿನ್ನ   ಮುಂದೆ ಚಕ್ಕಳ ಮಕ್ಕಳ ಹಾಕಿಕೊಂಡು, ಮತ್ತದೇ ಹಾಡು ಹಾಡ್ತಿದ್ದೆ. …. ತನುವು ನಿನ್ನದು ಮನವೂ ನಿನ್ನದು…

ಆದರೆ ಅದ್ಯಾರೋ ಹೇಳಿದರು, ನಿಂಗೆ ಮದುವೆ ಆಯ್ತಂತೆ ! ಪರೀಕ್ಷೆಗೂ ಓದದೆ ಅಳ್ತಾ ಕೂತಿದ್ದೆ. ಬದುಕಿನ್ ಹಾದಿಯಲ್ಲಿ ಕವಲು ದಾರಿಯ ತನಕ ನಡೆದು ಬಂದಿದ್ದೆ. ದಾರಿ ಹುಡುಕಬೇಕಿತ್ತು.  ಅದೇ ಸಮಯಕ್ಕೆ ನೀನು ನಿನ್ನ ದಾರಿ ಹಿಡಿದಿದ್ದೆ. ಕೊಡೆಗೂ ಕಾಸಿಲ್ಲದವನು ಬೇಡವಾಗಿದ್ನಾ ನಿಂಗೆ ? 5 ವರುಶ ಉಸಿರಿನ.. ಘಾಡವಾಗಿ ಪ್ರೀತಿಸಿದ್ದೆ. ಅದು ಬೇಡವಾಗಿತ್ತಾ ? ಗೊತ್ತಿಲ್ಲ. ಉತ್ತರ ಕೇಳುವ ಪುರುಸೋತ್ತು ನನಗಿರಲಿಲ್ಲ. ಕಾರಣ ಹೇಳುವ ತಾಳ್ಮೆ, ಅನಿವಾರ್ಯತೆಯೂ ನಿನಗಿರಲಿಲ್ಲ.

ನೀನೀಗ ತುಂಬಾ ನೆನಪಾಗ್ತೀಯಾ. ನಿನ್ನನ್ನು ಮರೀಬೇಕೂಂತ ಅದೇಸು ಸಲ ಪ್ರಯತ್ನ  ಮಾಡಿದ್ದೇನೆ. ಕ್ಷಣ ಗೆದ್ದು… ನಿರಂತರ ಸೋತಿದ್ದೇನೆ! ನಿನ್ನನ್ನು ಮರೆಯಲೇಬೇಕು ಅನ್ನೋ ಕೋಪವೋ ? ನಿರ್ದಯತೆಯೋ ? ದಡ್ಡತನವೋ ? ನಿಸ್ಸಾಹಯಕತೆಯೋ ? ಅರ್ತಹೀನ ಸೆಡವೋ ? ಉತ್ತರ ಸಿಗುತ್ತಿಲ್ಲ. ಮೂರು ವರುಶ – ಮತ್ತೆ ಮೂರು ತಿಂಗಳಾಯ್ತು. ಇವತ್ತಿಗೂ ಒಬ್ಬನೇ ಇದ್ದೇನೆ. ನಟ್ಟ ಮದ್ಯಾಹ್ನವೂ ನನಗ್ಯಾಕೋ ಕತ್ತಲು ಕತ್ತಲು ಅನ್ನಿಸ್ತಾ ಇದೆ. ದೀಪವೂ ನಿನ್ನದೇ… ಗಾಳಿಯೂ ನಿನ್ನದೇ  ಅಂತಾ ದಿನಾ ಕಿವಿಯಲ್ಲಿ ಹಾಡ್ತಾ ಇದ್ದೆ. ಆದ್ರೆ ನೀನೇ ದೀಪ ಆರಿಸಿ ಹೋದ ಮೇಲೆ, ಬೆಳಕೆಲ್ಲಿಯದು ಹೇಳು ?

 ನಿತ್ಯ ರಾತ್ರೆಗಳನ್ನು ಕಾರಣವಿಲ್ಲದೇ ಪುಡಿಗಟ್ಟುತ್ತಿದ್ದೇನೆ.  ಮಗ್ಗುಲು ಬದಲಿಸಿದರೆ ಮತ್ತೊಂದು ಕನಸು ಬಿಚ್ಚಿಕೊಳ್ಳುತ್ತದೆ. ಛಕ್ಕನೆ ಎದ್ದು ಕೂರುತ್ತೇನೆ, ನೀನಾಗ್ಲೇ ದೂರ…ಹುಡುಗೀ ನೀನು ನನ್ನೊಳಗಿನ ಜೀವ ಸುದೆ… ಅದಕ್ಕೇ ಮರೆಯಲಾಗುವುದಿಲ್ಲ.

ನಿನ್ನ ಪೆದ್ದು ಹುಡುಗ .

Blog at WordPress.com.