ಇಬ್ಬನಿ

April 20, 2008

ಹೌದು….. ನೀನ್ಯಾಕೆ ಒಲಿಯಬಾರದು ?

Filed under: Uncategorized — kemmayi @ 2:55 pm

ನೋಡದ ಹುಡುಗಿಗೆ….,

ನೀನು ಹೇಗಿದ್ದೀಯೋ ಗೊತ್ತಿಲ್ಲ, ಎಲ್ಲಿದ್ದಿ ಅಂತ ಮಾತ್ರ ಗೊತ್ತು. ನಿನ್ನ ನೋಡೂ ಇಲ್ಲ. ಆದರೆ, ಲೆಕ್ಕವಿಲ್ಲದಷ್ಟು ಬಾರಿ ಮಾತನಾಡಿದ್ದೇನೆ. ಯಾರೇ ನೀನು ಚೆಲುವೆಯ ರವಿಚಂದ್ರನ್ ಥರಾ ಆಗಿದೆ ನನ್ನ ಸ್ಥಿತಿ. ಪ್ರೀತಿಸಬೇಕು ಅಂತ ಬಯಸಿದ್ದೇನೆ. ಹಾಗೆ ಬಯಸುವುದರಲ್ಲಿ ತಪ್ಪೇನಿದೆ ಹೇಳು ?

ದೇವರಿದ್ದಾನೋ……… ಇಲ್ಲವೋ ? ವಾದ ಮಾಡುವವರು ಮಾಡುತ್ತಲೇ ಇರಲಿ ನಂಗಂತೂ ನೀನೇ ದೇವತೆ. ನಿನ್ನನ್ನೇ ಪೂಜಿಸುತ್ತೇನೆ. ನಿನಗೇ ಸಂಪೂರ್ಣ ನಿಷ್ಠನಾಗಿದ್ದೇನೆ. ಹಾಗಂತ ನಿನ್ನ ಎದುರಿಗೇ ಕುಳಿತು, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಬೇಕು ಅಂತ ಅಂದುಕೊಳ್ಳುತ್ತೇನೆ. ಅದರೇನು ಮಾಡಲಿ, ಏಳು ಸಮುದ್ರ ದಾಟಿ ಬರಬಲ್ಲೆ, ಆದರೆ ಈ ಬಂಜರು ಭೂಮಿ ದಾಟಿ ಬರುವುದೇ ಸಮಸ್ಯೆ ನೋಡು.

ನಿನಗಾದರೂ ಏನು ಕಮ್ಮಿ ಹೋಳು. ಮಲೆನಾಡಿನ ಹುಡುಗಿ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರ ಪಲ್ಲಂಗ, ಹೆಜ್ಜೆಯಿಟ್ಟಲ್ಲೆಲ್ಲಾ ನೀರು. ಈಗಂತೂ ಮಳೆಯ ಹಾಡು. ನನ್ನ ಅವಸ್ಠೆ ಕೇಳಿಲ್ಲಿ….. ಮಳೆ ಬಿಡು ಇಬ್ಬನಿಯ ಹನಿಯೂ ಇಲ್ಲ. ಬರೀ ಬೋಲು ಗುಡ್ಡಗಳ ಸಾಲು. ಒಂದಾನೊಂದು ಕಾಲವಿತ್ತು. ಮಳೆಬಂದರೆ ಸಾಕು, ಮನಸೋ ಇಚ್ಚೆ ಮುಂಗಾರಿನ ಅಂಗಳದಲ್ಲಿ ಕುಣಿಯುತ್ತಿದ್ದೆ. ಮೊದಲ ಮಳೆಗೆ ಬೀಳುವ ಆಲಿಕಲ್ಲು ಹೆಕ್ಕಿಕೊಳ್ಳಲು ಹಪಹಪಿಸುತ್ತಿದ್ದೆ. ಶಾಲೆಯೊಳಗಡೆ ನೀರು ಬಂದರೆ ಸಾಕು, ನೋಟು ಪುಸ್ತಕದ ಹಾಳೆಗಳು ದೋಣಿ ಗಳಾಗುತ್ತಿದ್ದವು. ಮನ್ಗೆ ಬಂದರೆ, ಅಜ್ಜನ ಹುಳಿ ಅಡರಿನ ಏಟು ಕಾಯ್ತಾ ಇರುತ್ತಿತ್ತು. ಈಗ ಹಾಗಲ್ಲ ನೋಡು. ಇಲ್ಲಿ ಮಳೆ ಒಲಿಯುವುದೇ ಇಲ್ಲ, ಹೌದು….. ನೀನ್ಯಾಕೆ ಒಲಿಯಬಾರದು ?

ನಿನ್ನ ಪೆದ್ದು ಹುಡುಗ

April 14, 2008

ರಾಸ್ಕಲ್ ದೇವದಾಸನೂ… ಹೈದ್ರಾಬಾದ್ ಮಳೆಯೂ…..,

Filed under: ಸುಮ್ ಸುಮ್ನೆ — kemmayi @ 12:58 pm
Tags: ,

 

ನಿನ್ನೆ ರಾತ್ರಿ ಇದ್ದಕ್ಕಿದ್ದ ಹಾಗೆ ಸುರಿಯಿತಲ್ಲ, ಪಿರಿಪಿರಿ ಮಳೆ, ಅದ್ಯಾಕೋ ನಾನು ಒಂದು ವರುಷ ಹಿಂದೆ ಹೋಗಿ ಬಿಟ್ಟೆ. ಅಷ್ಟಕ್ಕೆಲ್ಲಾ ಕಾರಣ.. ರಸ್ತೆ ಬದಿಯಲ್ಲಿ ಸುಮ್ಮನೆ ಮುದುಡಿ ಮಲಗಿದ್ದ ನಾಯಿಮರಿ, ಬಿಳಿಯ ಬಣ್ಣದ್ದು. ಅದು ಮಲಗಿದ ಪರಿ ನೋಡಿದರೆ ಥಟ್ಟನೆ ನೆನಪಾಗುತ್ತಿದ್ದದ್ದು  ಮುಂಗಾರು ಮಳೆಯ ಆ ರಾಸ್ಕಲ್ ದೇವದಾಸ.

ಅಷ್ಟಕ್ಕೂ ಇಲ್ಲಿ ಮಳೆ ಬೀಳುವುದೇ ಅಪರೂಪ. ಹೈದ್ರಾಬಾದಿನ ರಸ್ತೆಗಳು  ಮಳೆ ಸಿಂಚನಕ್ಕೆ ಅದೆಷ್ಟು ಕಾದು ಕೂತಿರುತ್ತವೆ ಅಂದ್ರೆ, ಬಿದ್ದ ಹನಿ ಎಲ್ಲಿ ಹೋಗತ್ತೋ ಗೊತ್ತೇ ಆಗುವುದಿಲ್ಲ. ಧರೆ ಅಷ್ಟು ಬೇಗ ಹೀರಿಕೊಳ್ಳತ್ತೆ. ಮಳೆ ಕಾಣದೆ ನಾನಂತೂ ತೀರಾ ಬಂಜರಾಗಿದ್ದೆ - ಭಾವನೆಗಳೇ ಇಲ್ಲದೆ. ನಾನಾದರೂ ಬಂದದ್ದು ಕನ್ನಡ ತಾಯಿಯ ಪ್ರಭಾವಳಿ-ಕರಾವಳಿಯಿಂದ. ಅಲ್ಲಿ ಮಳೆ ಅಂದರೆ ಹಬ್ಬ. ಮೊದಲ ಹನಿ ಬೀಳುವುದಕ್ಕೆ ಹತ್ತು ನಿಮಿಷ ಮೊದಲೇ ಕೇಳಿಸೋ ಭೋ ಅನ್ನೋ ಸದ್ದು, ಅಂಗಳದಲ್ಲಿದ್ದ ಒಣ ಅಡಿಕೆ ತುಂಬಿಸೋ ಒದ್ದಾಟ, ಕಟ್ಟಿಗೆ ಒಟ್ಟಿಗೆ ಟರ್ಪಾಲು ಹೊದಿಸೋ ಧಾವಂತ, ದನಗಳನ್ನು ಹಟ್ಟಿಗೆ ಅಟ್ಟೋ ಆತಂಕ. ಇಷ್ಟೆಲ್ಲಾ ಆದರೂ ಮತ್ತೆ ಮಳೆಯಲ್ಲಿ ನೆನೆಯೋದಿದೆಯಲ್ಲಾ, ಅಬ್ಬಾ ಅದನ್ನು ಅನುಭವಿಸಿಯೇ ತೀರಬೇಕು.

ಅಂತಹ ಊರಲ್ಲಿ ಹುಟ್ಟಿ ಬೆಳೆದ ನನ್ನಂಥ ಮಳೆ-ಭಾವುಕನಿಗೆ ಇಲ್ಲಿ ದಿನಕಳೆಯೋದು ದುಸ್ತರ. ಅಲ್ಲಿ ಗಂಟೆಗಟ್ಟಲೇ… ದಿನವಿಡೀ ಸುರಿಯೋ ಮುಂಗಾರು ಮಳೆಗೂ ಇಲ್ಲಿ ಅಮಾವಾಸ್ಯೆಗೆ ಒಮ್ಮೆ ಮಾತ್ರ - ವರುಷಕ್ಕೆ ಹನ್ನೆರಡೇ ಸಲ ಬರೋ ಮಳೆಗೂ ಅದೆಷ್ಟು ಅಂತರ- ಅಬ್ಬಬ್ಬಾ ಅಂದರೆ ಐದೇ ನಿಮಿಷಕ್ಕೆ ಮಳೆ ಖಲಾಸ್! ನಿಮಗೆ ಆಶ್ಚರ್ಯ ಆಗಬಹುದು, ಛತ್ರಿ ಇಲ್ಲದೆ ನಾನು ಬರಾಬ್ಬರಿ ಮೂರು ಮಳೆಗಾಲ ಕಳೆದಿದ್ದೇನೆ.  ಅಷ್ಟರ ಮಟ್ಟಿಗೆ ಉಳಿತಾಯ!  ಇನ್ ಫ್ಯಾಕ್ಟ್ ಮಳೆಗಾಲ ಯಾವಾಗ ಆರಂಭ ಆಯಿತು ಯಾವಾಗ ಕೊನೆಗೊಂಡಿತು ಅಂತ ಗೊತ್ತೇ ಆಗಲ್ಲ.

ಅಂತಹ ಸ್ಥಿತಿಯಲ್ಲಿದ್ದಾಗ, ನಿನ್ನೆ ಇದ್ದಕ್ಕಿದ್ದ ಹಾಗೆ ಮಳೆ ಸುರಿಯಿತು. ಕರಾವಳಿ-ಮಲೆನಾಡಿನಲ್ಲಿ ಅಂಗಳ ಗುಡಿಸೋವಾಗ ನೀರು ಚಿಮುಕಿಸುತ್ತಾರಲ್ಲ…. ಅಷ್ಟೇ ಅಷ್ಟು ಮಳೆ. ಅಂಥಾ ಮಳೆಗೂ ಪಾಪ ಆ  ಬೆಳ್ಳಗಿನ ಕರಿಮೂತಿಯ ನಾಯಿ ಮರಿ ಬೆದರಿ ಮಲಗಿತ್ತು. ಥೇಟ್ ದೇವದಾಸನ ಥರಾ! ಒಂದೂವರ ವರುಷ ಹಿಂದೆ ನೋಡಿದ ಮುಂಗಾರು  ಮಳೆಯ ಪ್ರತಿ ಫ್ರೇಮ್ ಕೂಡಾ ಹಾಗೆ ಕಣ್ಮುಂದೆ ಬಂದು ಹೋದವು. ನಾನು ಒಂದು ವರುಷ ಹಿಂದೆ ಹೋಗಿದ್ದೆ. ಸುಮ್ಮನೆ ಇಷ್ಟು ನಿಮಗೆ ಹೇಳಬೇಕು ಅನ್ನಿಸ್ತು ಅಷ್ಟೇ.
- ಪ್ರೀತು ಕೆಮ್ಮಾಯಿ
ಬರೆದದ್ದು -ಫೆಬ್ರವರಿ ತಿಂಗಳಿನಲ್ಲಿ

September 10, 2007

ಮಳೆ ಸುರಿಯಬೇಕು ಎದೆಹೊಲಕ್ಕೆ…

Filed under: ಕವನ — kemmayi @ 1:26 pm

 

ಭೀಕರ ಮಳೆಗಾಲ
ವಸುದೆಯ ಹರುಶಕ್ಕೆ ಸಾಟಿಯೇ ?
ಮಯ್ಯ ತುಂಬಾ ತೆನೆತುಂಬಿ
ತೂಗುತ್ತಿದ್ದಾಳೆ, ನಲಿಯುತ್ತಿದ್ದಾಳೆ
ಎಸ್ಟೊಂದು ವ್ಯತ್ಯಾಸ !

ಇಲ್ಲಿ ಮಾನವ ಮನದಲ್ಲಿ ಒಸರು
ಬತ್ತಿ ಹೋಗಿದೆ- ಪ್ರೀತಿಯ ಒಸರು.
ಬರಡಾದ ಎದೆಗೆ ವಿಕ್ರತ
ವಿದ್ವಂಸತೆಯ ಅಟ್ಟಹಾಸ
ಪ್ರೀತಿಯ ಬೆಳೆ ಬೆಳೆಯುವಿದೇ ಇಲ್ಲ
ಮಾನವೀಯತೆಯ ಸೆಲೆ
ಹುಟ್ಟುವುದೇ ಇಲ್ಲ. ‘ನಾವು
ದೇವಮಾನವರು’ ಅಹಮಿನ
ಟೇಂಕಾರಕ್ಕೆ ಸಾದ್ವಿಗಳ ಎದೆ ನಡುಗುತ್ತದೆ.
ಸಂವತ್ಸರಗಳು 50 ಕಳೆದವು ..
ಸುಗ್ಗಿ ಸಮ್ರದ್ದಿಯಾಗಬೇಕಿದ್ದ ಕಾಲ
ಭಯದ ಮಾರುತ ನುಗ್ಗಿ ಚೆಲ್ಲಾಪಿಲ್ಲಿ.
ಒಂದೆಡೆ ಸೆಳೆತ, ಮತ್ತೊಂದೆಡೆ ಎಳೆತ
ಮದ್ದುಂಟೇ ಈ ಕ್ರೂರತೆಗೆ .
ಅಹುದು …….,
ಮಳೆ ಸುರಿಯಬೇಕು ಎದೆ ಹೊಲಕ್ಕೆ
ಪ್ರೀತಿಯ ಮಳೆ.

ಪ್ರೀತಮ್ ಕೆಮ್ಮಯಿ

August 31, 2007

ಆಕೆ ಮತ್ತು ಪ್ರೀತಿ

Filed under: ಬೋನ್ಸಾಯ್ — kemmayi @ 1:12 pm

ಆಕೆ ಅವನ ಬಳಿ ತುಟಿ ಬಿಚ್ಚಿ ಮಾತನಾಡದಿದ್ದರೂ, ಕಣ್ಣಿನ ಮಾತುಗಳು ಸಾವಿರ ಪದಗಳನ್ನು ಮೀರಿಸಿದ್ದವು. ಪ್ರೀತಿಯ ದದ್ಯೋತಕವಾಗಿ ಮಳ್ಳಿಗೆಯ ಬಳಿಳಿಯನ್ನ್ಫು ಆಕೆಗೆ ನೀಡಿ ಬೇಗ ಬರುವೆನೆಂದು ತಿಳಿಸಿ ಊರಿಗೆ ಮರಳಿದ. ಆಕೆ ಅದನ್ನು ಜೋಪಾನವಾಗಿ ಬೆಳೆಸಿದಳು. ಬಳ್ಳಿ ಮಾವಿನ ಮರದ ಆಸರೆಯಲ್ಲಿ ವಿಸ್ತಾರವಾಗಿ ಬೆಳೆಯಿತು. ಮೊಗ್ಗಾಯಿತು….ಹೂವಾಯಿತು…..ಬಾಡಿತು. ಆತನ ಸುಳಿವಿಲ್ಲ.

ಅವನ ನೆನಪು ಮಾಸದಾಗ ಅಕ್ಕನ ಕಂದನಿಗೆ ಆ ಸರೆಯಾದಳು. ಆ ಕಂದನ ಕಣಣಲ್ಲಿ ಅವನ ಬಿಂಬ ಕಾಣುತ್ತಿದ್ದಳು. ಕಾಯುತ್ತಿದ್ದಳು. ಕೊನೆಗೂ ಆತ ಬಂದನೇ ಬಂದ.

ಮಲ್ಲಿಗೆಯ ಬಳ್ಳಿ ಬಾಡಿತ್ತು. ಅದರ ಹಿಂದೆ ನಿಂತು ದಿಟ್ಟಿಸಿದ. ಇವಳ ಮಡಿಲಲ್ಲಿ ಕಿಲಕಿಲ ನಗುತ್ತಿತ್ತು ಮುದ್ದುಕಂದ. ಆತನ ಪ್ರೀತಿತ್ಯ ಕುಸುಮ ಅರಳುವ ಮೊದಲೇ ಬಾಡಿತ್ತು..ಬಂದ ದಾರಿಯಲ್ಲೇ ಹಿಂತಿರುಗಿದ.

ಮಲ್ಲಿಗೆ ಬಳ್ಳಿಯ ಆಸರೆ ಕೊಂಡಿ ಕಳಚಿ ಬಿತ್ತು.
ಪುನ ಆಕೆ ಅವನಿಗಾಗಿ ಅಲ್ಲೇ ಕಾದಳು.

August 15, 2007

ನಾವೀಗ ‘ಹಿರಿಯ ನಾಗರೀಕರು’- ನಮಗೀಗ 60

Filed under: ಸುಮ್ ಸುಮ್ನೆ — kemmayi @ 5:55 am

ಸ್ವಾತಂತ್ರ್ಯ ಸುಮ್ಮನೇ ಬಂದದ್ದಲ್ಲ. ಅಲ್ಲಿ ಕೋಟಿ ತ್ಯಾಗದ ಫಲವಿದೆ.
ನಮ್ಮ ಹೆಮ್ಮೆಯ ಹಿಂದೆ ನೂರಾರು ಏಳುಬೀಳುಗಳಿವೆ
ಹಾಗೇ 60ರ ಸಂಭ್ರಮ ಆಚರಿಸಲು 60ಕ್ಕೂ ದಾರಿಗಳಿವೆ.
ಇದು ನನ್ನ ದಾರಿ.

ಸ್ವತಂತ್ರವಾಗಿರುವ 60ರ ಸಂಭ್ರಮಕ್ಕೆ ನನ್ನ ಶುಭಾಶಯಗಳು.

ಸರ್ವೆಗಳು ತುಂಬಾ ನಡೆಯುತ್ತಿವೆ. ಯಾರು ಪ್ರಭಾವಿ ಭಾರತೀಯರು ಅಂತ.
ಇನ್ನೂ 40 ವರುಶಗಳಿವೆ. ಸ್ವಾತಂತ್ರ್ಯದ ಶತಕ ಬಾರಿಸಲು.
ಅದರೊಳಗೆ, ನಾವು ಪ್ರತಿಯೊಬ್ಬರೂ, ಪ್ರಭಾವಿಗಳಾಗಬೇಕು.

ಅದು ಸ್ವಾತಂತ್ರ್ಯದ 60ರ ಹೊಸ್ತಿಲಲ್ಲಿ ನಿಂತಿರುವ ನಮಗೆ ಗುರಿಯಾಗಬೇಕು.

August 6, 2007

ಈ ಪ್ರೀತಿಯಾ ಮರೆತು ನಾ ಹೇಗೆ ಬಾಳಲ್ಹೇಳು ?

Filed under: Uncategorized — kemmayi @ 6:35 am

ಒಲವಿನ ಜೀವ ಸುಧೆಗೆ..,

ಅರೆರೆ, ಆಗಲೇ, ಬರಾಬ್ಬರಿ 5 ವರುಶ ಆಯ್ತು ನೋಡು, ನಿಂಗೆ ಪತ್ರ ಬರೆದು. ನೀನಿಲ್ಲ್ದೆ ಕಳೆ ದ  5 ಯುಗಗಳು….ಅಬ್ಬಾ…. ಭಯ ಆಗತ್ತೆ. ಇವತ್ಯಾಕೋ  ಬರೆಯಲೇ ಬೇಕೆನ್ನಿಸಿ ದೆ. ಯಾಕೆ ಗೊತ್ತಾ ? ನೀನು ಮರೆತಿರಬಹುದು. ಆದರೆ ನಂಗೆ ಹಾಗಲ್ಲ ನೋಡು, ನಮ್ಮ ಪ್ರೇಮಕ್ಕೆ ಮೊಹರು ಬಿದ್ದ ದಿನ ಇವತ್ತು. ಕಾಲೇಜಿನ್ ಕ್ಲಾಸ್ ರೂಮಿನಲ್ಲಿ ಘಂ ಟಾ ಘೋಶವಾಗಿ, ನಾನು ನಿನ್ನನ್ನು ಪ್ರೀತಿಸ್ತೇನೆ ಅಂತ ಹೇಳಿಕೊಂಡ ದಿನ. ಅದಕ್ಕೇ     ಇಸ್ಟೊಂದು ಹಹಪಹಪಿಕೆ.

ಅದು ಮೂರರ ಸಂಜೆ. ಆಗ ತಾನೇ ಸೋನೆ ಮಳೆ ಸುರಿಯುತ್ತಿತ್ತು. ಖಾಲಿಯಾದ ಕಾರಿಡಾರಿನ  ಬಳ ನಾನು ನಿಂತಿದ್ದೆ, ಮಳೆ ಕಡಿಮೆಯಾಗುವುದನ್ನೇ ನಿರೀಕ್ಸಿಸುತ್ತಾ. ನೀನ್ಯಾಕೋ ಮುಂದೆ ಹೋದವಳು  ಕೂಡಾ ತಿರುಗಿ ಬಂದು. ನಂಗೆ ಕೊಡೆ ಹಿಡಿದೆ. ಕಣ್ಣಲ್ಲಿ ವಾತ್ಸಲ್ಯವಿತ್ತು. ನಿನ್ನ ಒಲವಿನ  ಕರೆಗೆ ಬೇಡ ಅನ್ನುವ  ಗತ್ತು ನನ್ನಲ್ಲಿರಲಿಲ್ಲ. ಮರುದಿನ ಕಾಲೇಜು ತಂಬಾ ಗುಲ್ಲೋ ಗುಲ್ಲು. ನಮಗೇ ಅರಿವಿಲ್ಲದೆ, ನಾವು ಪ್ರೇಮ ಸಾಮ್ರಾಜ್ಯದಲ್ಲಿ  ದಾಖಲಾದೆವು. ನನ್ನ ಚಿಗುರು ಮೀಸೆಯ ಅಡಿಯಲ್ಲಿ ಸ್ವಲ್ಪ   ದರ್ಪವಿತ್ತು.  ಹಾಗಾಗಿ ನಾನು ಪ್ರೀತಿಸಲ್ಲ ಅಂದೆ.  ಏಸೊಂದು ನಿರ್ದಯಿ ನೋಡು ನಾನು.

ದಿನವೂ ಇದೇ ಕತೆ  ಕೇಳಿ ಸಾಕಾಗಿದ್ದ ನಿನಗೆ ಹೊಸ ಕಾಲೇಜು, ಹೊಸ ಗೆಳೆಯರು ಬರೆ ಒಂದೇ ತಿಂಗಳಿಗೆ ಬೋರಾದರು. ನಿನ್ನ ಕಂದಿದ ಮುಖ ನೋಡೋದಕ್ಕೆ ನನ್ನಿಂದ ಸಾದ್ಯವಾಗಲಿಲ್ಲ. ಕೊನೆಗೆ ಕ್ಲಾಸಿನಲ್ಲೇ ಎಲ್ಲರ ಎದುರಿಗೆ ಹೇಳಿದೆ… ನಿನ್ನ ಪರ್ಮಿಶನ್ನೂ  ಇಲ್ಲದೆ!

ಅದಾಗಿ, ಒ0ದು ತಿಂಗ ಳು ಬೇಕಾಯಿತು ನೋಡು ಪ್ರೀತಿಗೆ ನಿನ್ನ ಸಹಿ ಬೇಳಲು. ಆಮೇಲೆ ನಡೆದಿದ್ದೆಲ್ಲಾ  ಬರೀ ಕತೆ. ಅದೇಸು ಕನಸು ಕಂಡಿದ್ದೆವು. ಅದೇಸು ಚಿತ್ತಾರ ಬರೆದಿದ್ದೆವು. ನನಗೆ ಕೊಡೆ  ಹಿಡಿದ ಹುಡುಗಿಯ ಕ್ಯ್ ಹಿಡಿಯೋ ಭಾಗ್ಯ ನನ್ನದು ಅಂದು ಕೊಳ್ಳುವಾಗಲೇ….. ನೀನು ನನ್ನ ಬಾಳಿನಿಂದ ಎದ್ದು ಹೋಗಿದ್ದೆ.  ಅದು ಮೇ 2, 2004. ಅಂತಿಮ ವರುಶದ ಪರೀಕ್ಷೆ ಬರೆಯುತ್ತಿದ್ದೆ. ಇನ್ನೆರಡೇ ಎರಡು ವಾರ ಕಳೆದಿರುತ್ತಿದ್ದರೆ, ನಿನ್ನ   ಮುಂದೆ ಚಕ್ಕಳ ಮಕ್ಕಳ ಹಾಕಿಕೊಂಡು, ಮತ್ತದೇ ಹಾಡು ಹಾಡ್ತಿದ್ದೆ. …. ತನುವು ನಿನ್ನದು ಮನವೂ ನಿನ್ನದು…

ಆದರೆ ಅದ್ಯಾರೋ ಹೇಳಿದರು, ನಿಂಗೆ ಮದುವೆ ಆಯ್ತಂತೆ ! ಪರೀಕ್ಷೆಗೂ ಓದದೆ ಅಳ್ತಾ ಕೂತಿದ್ದೆ. ಬದುಕಿನ್ ಹಾದಿಯಲ್ಲಿ ಕವಲು ದಾರಿಯ ತನಕ ನಡೆದು ಬಂದಿದ್ದೆ. ದಾರಿ ಹುಡುಕಬೇಕಿತ್ತು.  ಅದೇ ಸಮಯಕ್ಕೆ ನೀನು ನಿನ್ನ ದಾರಿ ಹಿಡಿದಿದ್ದೆ. ಕೊಡೆಗೂ ಕಾಸಿಲ್ಲದವನು ಬೇಡವಾಗಿದ್ನಾ ನಿಂಗೆ ? 5 ವರುಶ ಉಸಿರಿನ.. ಘಾಡವಾಗಿ ಪ್ರೀತಿಸಿದ್ದೆ. ಅದು ಬೇಡವಾಗಿತ್ತಾ ? ಗೊತ್ತಿಲ್ಲ. ಉತ್ತರ ಕೇಳುವ ಪುರುಸೋತ್ತು ನನಗಿರಲಿಲ್ಲ. ಕಾರಣ ಹೇಳುವ ತಾಳ್ಮೆ, ಅನಿವಾರ್ಯತೆಯೂ ನಿನಗಿರಲಿಲ್ಲ.

ನೀನೀಗ ತುಂಬಾ ನೆನಪಾಗ್ತೀಯಾ. ನಿನ್ನನ್ನು ಮರೀಬೇಕೂಂತ ಅದೇಸು ಸಲ ಪ್ರಯತ್ನ  ಮಾಡಿದ್ದೇನೆ. ಕ್ಷಣ ಗೆದ್ದು… ನಿರಂತರ ಸೋತಿದ್ದೇನೆ! ನಿನ್ನನ್ನು ಮರೆಯಲೇಬೇಕು ಅನ್ನೋ ಕೋಪವೋ ? ನಿರ್ದಯತೆಯೋ ? ದಡ್ಡತನವೋ ? ನಿಸ್ಸಾಹಯಕತೆಯೋ ? ಅರ್ತಹೀನ ಸೆಡವೋ ? ಉತ್ತರ ಸಿಗುತ್ತಿಲ್ಲ. ಮೂರು ವರುಶ - ಮತ್ತೆ ಮೂರು ತಿಂಗಳಾಯ್ತು. ಇವತ್ತಿಗೂ ಒಬ್ಬನೇ ಇದ್ದೇನೆ. ನಟ್ಟ ಮದ್ಯಾಹ್ನವೂ ನನಗ್ಯಾಕೋ ಕತ್ತಲು ಕತ್ತಲು ಅನ್ನಿಸ್ತಾ ಇದೆ. ದೀಪವೂ ನಿನ್ನದೇ… ಗಾಳಿಯೂ ನಿನ್ನದೇ  ಅಂತಾ ದಿನಾ ಕಿವಿಯಲ್ಲಿ ಹಾಡ್ತಾ ಇದ್ದೆ. ಆದ್ರೆ ನೀನೇ ದೀಪ ಆರಿಸಿ ಹೋದ ಮೇಲೆ, ಬೆಳಕೆಲ್ಲಿಯದು ಹೇಳು ?

 ನಿತ್ಯ ರಾತ್ರೆಗಳನ್ನು ಕಾರಣವಿಲ್ಲದೇ ಪುಡಿಗಟ್ಟುತ್ತಿದ್ದೇನೆ.  ಮಗ್ಗುಲು ಬದಲಿಸಿದರೆ ಮತ್ತೊಂದು ಕನಸು ಬಿಚ್ಚಿಕೊಳ್ಳುತ್ತದೆ. ಛಕ್ಕನೆ ಎದ್ದು ಕೂರುತ್ತೇನೆ, ನೀನಾಗ್ಲೇ ದೂರ…ಹುಡುಗೀ ನೀನು ನನ್ನೊಳಗಿನ ಜೀವ ಸುದೆ… ಅದಕ್ಕೇ ಮರೆಯಲಾಗುವುದಿಲ್ಲ.

ನಿನ್ನ ಪೆದ್ದು ಹುಡುಗ .

July 20, 2007

ಗಭ೯ಪಾತ

Filed under: Uncategorized — kemmayi @ 4:57 am

’ನೀ ಒಲ್ಲೆ’- ಎಂದಾಗ ಚೀರಿದ್ದು
ಕನಸು. ಹಾರಿದ್ದೇ ಎತ್ತರ್ ಎತ್ತರ
ಬ್ಲು ಎತ್ತರಕ್ಕೇ. ಕಾಮೋ೯ಡದ
ಅಂಚಿನಿಂದ ಇಣುಕಿ ನಕ್ಕು ಛೇಡಿಸಿತು
ಗ್ರೀಶ್ಮದ ಕಾಮನ ಬಿಲ್ಲಿನ ಹಾಗೆ,
ಬಣ್ಣ ಬಣ್ಣಗಳು ತುಂಬಿ.
ಪುಕ್ಕ ಬೆಳೆಯಿತೆಂದು ರೆಕ್ಕೆ ಕಟ್ಟಿ ಹಾರಿದೆ
ಹಿಡಿಯಲು, ಕರಗುವ ಮೊದಲು..
ಬೆಳ್ಳಿಹಸುವಿನ ಮರೆಯಲ್ಲಿ ಇಈನವಾಗಿತ್ತು
ಕನಸು ! ಕೆಯ್ ಚಾಚಿದೆ
ಸಿಕ್ಕಿದ್ದು ಬ್ರಿಯ್ ಬಿಸಿಲ ಕೋಲು.

ಕನಸುಗಳ ಗಭ೯ಪಾತವಾಗಿತ್ತು.

- ಪ್ರೀತು ಕೆಮ್ಮಾಯಿ

July 17, 2007

ಎರಡು ಹನಿ

Filed under: Uncategorized — kemmayi @ 5:35 am

ವಸಂತ ಸುರಿಸಿದ
ಇಬ್ಬನಿ
ಕರಗುವ್ ಮುನ್ನವೇ
ಗ್ರೀಶ್ಮ ಸುರಿಸಬೇಕೇ
ಕಂಬನಿ

-ಕೆಮ್ಮಾಯಿ
——–
ಸವಿ ನೆನಪುಗಳೇ…
ಹುಚ್ಚು ಮನಸ್ಸಿನಿಂದ
ಕೊಚ್ಚಿ ಹೋಗುವ ಮುನ್ನ
ನನಗೊಂದು ಮಾತು
ಹೇಳಿ ಹೋಗಬಾರದಿತ್ತೇ ?

-ಕೆಮ್ಮಾಯಿ

Hello world!

Filed under: Uncategorized — kemmayi @ 4:03 am

Welcome to WordPress.com. This is your first post. Edit or delete it and start blogging!

Blog at WordPress.com.